appu ಯುವರತ್ನ ಪುನೀತ್‌ಗೆ ಅಭಿಮಾನಿಗಳ ಉಘೇ

appu
puneeth in yuvaratna

appu ಯುವರತ್ನ ಟೀಸರ್‌ ನೋಡಿದ 30 ಲಕ್ಷ ಮಂದಿ!

ಬೆಂಗಳೂರು: ಪವರ್‌ಸ್ಟಾರ್‍ ಪುನೀತ್ ರಾಜ್‌ಕುಮಾರ್‍ ಅವರ ( appu ) ಬಹುನಿರೀಕ್ಷಿತ ಚಿತ್ರ ಯುವರತ್ನದ ಮೊದಲ ಟೀಸರ್‍ ಯೂಟ್ಯೂಬಿನಲ್ಲಿ ಚಿಂದಿ ಉಡಾಯಿಸಿದೆ. ದಸರೆಯಂದು ಬಿಡುಗಡೆಯಾದ ಈ ಟೀಸರ ಈಗಾಗಲೇ ಅಭಿಮಾನಿಗಳಲ್ಲಿ ಗುಂಗೆಬ್ಬಿಸಿದೆ.

ಇದನ್ನೂ ಓದಿ: 100 ಶತದಿನದತ್ತ ಸೂಪರ್‌ಹಿಟ್ ದರ್ಶನ್ ಕುರುಕ್ಷೇತ್ರ ದಾಪುಗಾಲು

ಯುವರತ್ನನ ಮೊದಲ ಪರಿಚಯವನ್ನು ಈವರೆಗೆ 30 ಲಕ್ಷ ಮಂದಿ ಕಣ್ತುಂಬಿಕೊಂಡಿದ್ದು, 60 ಸಾವಿರಕ್ಕೂ ಹೆಚ್ಚು ಟಿಪ್ಪಣಿಗಳನ್ನು ದಾಖಲಿಸಿದೆ. ತೀರಾ ವಿಶಿಷ್ಟ ಗೆಟಪ್ಪಿನಲ್ಲಿ ಕಾಣಿಸಿಕೊಂಡಿರುವ ಪವರ್‌ಸ್ಟಾರ್‍ ಪುನೀತ್ ಅವರ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಟೀಸರ್‌ನಲ್ಲಿ ಅಪ್ಪು ಚಮತ್ಕಾರಕ್ಕೆ ಅಭಿಮಾನಿಗಳಷ್ಟೇ ಅಲ್ಲ ಸೆಲೆಬ್ರಿಟಿಗಳು ಸಹ ಮೆಚ್ಚುಗೆ ಸೂಚಿಸಿದ್ದಾರೆ. ಸಂಜಯ್ ದತ್, ಪ್ರಶಾಂತ್ ನೀಲ್ ಅವರು ಅಪ್ಪುಗೆ ಹ್ಯಾಟ್ಸಾಫ್ ಮಾಡಿದ್ದಾರೆ. ಟೀಸರಿನಲ್ಲಿ ರಗ್ಬಿ ಆಟಗಾರನಾಗಿ ಪುನೀತ್ ಕಾಣಿಸಿಕೊಮಡಿದ್ದು, ಅವರ ಖಡಕ್ ಮಾತುಗಾರಿಕೆ ಸಾಕಷ್ಟು ಗಮನ ಸೆಳೆದಿದೆ.

ಸೂಪರ್‌ಹಿಟ್ ರಾಜಕುಮಾರ ನಂತರ ಪುನೀತ್ ಮತ್ತು ನಿರ್ದೇಶಕ ಸಂತೋಷ್ ಆನಂದ್‌ರಾಮ್ ಎರಡನೇ ಬಾರಿಗೆ ಈ ಚಿತ್ರದಲ್ಲಿ ಒಂದಾಗಿದ್ದು, ಇದು ಮತ್ತೊಂದು ಸೂಪರ್‍ ಹಿಟ್ ಆಗುವ ಎಲ್ಲ ಲಕ್ಷಣಗಳು ಕಾಣುತ್ತಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಸಿನಿಮಾದಲ್ಲಿ ಪುನೀತ್‌ಗೆ ಜೋಡಿಯಾಗಿ ಸಯ್ಯೇಶಾ ಕಾಣಿಸಿಕೊಳ್ಳುತ್ತಿದ್ದು, ರಾಧಿಕಾ ಶರತ್ ಕುಮಾರ್, ಬೋಮನ್ ಇರಾನಿ ಹಾಗೂ ಡಾಲಿ ಧನಂಜಯ ಸೇರಿದಂಥೆ ದೊಡ್ಡ ತಾರಾ ಬಳಗವೇ ಇದೆ. ಹುಬ್ಬಳ್ಳಿ, ಮೈಸೂರು, ಮಂಗಳೂರಿನಲ್ಲಿ ಈಗಾಗಲೇ ಚಿತ್ರೀಕರಣ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...