annular eclipse ಕಂಕಣ ಸೂರ್‍ಯ ಗ್ರಹಣಕ್ಕೆ ಕಾತರ, ಕುತೂಹಲದ ಕ್ಷಣಗಣನೆ

annular eclipse
solar eclipse

annular eclipse ಬೆ. 8.06ರಿಂದ 11.11ರ ವೇಳೆಯಲ್ಲಿ ಗ್ರಹಣ: ಬಹುತೇಕ ಎಲ್ಲ ದೇಗುಲಗಳು ಮಧ್ಯಾಹ್ನದವರೆಗೆ ಬಂದ್

ಬೆಂಗಳೂರು: ವರ್ಷಾಂತ್ಯದಲ್ಲಿ ಸಂಭವಿಸಲಿರುವ ಅಪರೂಪದ ಕಂಕಣ ( annular eclipse) ಸೂರ್‍ಯಗ್ರಹಣಕ್ಕೆ ಕಾತರ, ಕಳವಳದ ಕ್ಷಣಗಣನೆ ಆರಂಭವಾಗಿದೆ. ಸೂರ್ಯಗ್ರಹಣವು ಡಿ.26ರ ಬೆಳಿಗ್ಗೆ 8.06ರಿಂದ ಆರಂಭವಾಗಿ, ಬೆಳಿಗ್ಗೆ 11.11ಕ್ಕೆ ಪೂರ್ಣಗೊಳ್ಳಲಿದೆ.

ಇದನ್ನೂ ಓದಿ: ವಿವಾದಕ್ಕೆ ಕಾರಣವಾಯ್ತು ಗೌಡರ ಬಗ್ಗೆ ಕೃಷ್ಣ ಉಲ್ಲೇಖ

ಒಟ್ಟು 3 ಗಂಟೆ 05 ನಿಮಿಷಗಳವರಗೆ ಸಂಭವಿಸಲಿರುವ ಕಂಕಣ ಸೂರ್ಯಗ್ರಹಣದ ಸಂದರ್ಭದಲ್ಲಿ ರಾಜ್ಯದ ಬಹುತೇಕ ಎಲ್ಲ ದೇವಾಲಯಗಳಲ್ಲಿಯೂ ಪೂಜಾ ಕೈಂಕರ್ಯಗಳು ಇರುವುದಿಲ್ಲ. ಗ್ರಹಣ ಕಾಲದ ನಂತರ ಶುದ್ಧಿಕಾರ್ಯ ಪೂರೈಸಿ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ.

ರಾಜ್ಯದ ಪ್ರಮುಖ ದೇವಾಲಯವಾದ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೂಡ ಡಿ.26ರಂದು ಮಧ್ಯಾಹ್ನದವರೆಗೆ ದರ್ಶನ, ತುಲಾಭಾರ, ಅಭಿಷೇಕ ಮೊದಲಾದ ಸೇವೆಗಳನ್ನು ತಾತ್ಕಲಿಕ ಸ್ಥಗಿತಗೊಳಿಸಲಾಗಿದೆ. ಡಿ. 25ರಂದು ರಾತ್ರಿ 6.30ಕ್ಕೆ ಮಹಾಪೂಜೆ, ರಾತ್ರಿ ಭೋಜನ ಪ್ರಸಾದವೂ ಇರುವುದಿಲ್ಲ.

ತಿರುಪತಿಯಲ್ಲಿಯೂ ದೇವರ ದರ್ಶನಕ್ಕೆ ತಾತ್ಕಲಿಕ ಸ್ಥಗಿತಗೊಳಿಸಲಾಗುವುದು ಎಂದು ಟಿಟಿಡಿ ತಿಳಿಸಿದೆ. ಗ್ರಹಣದ ಹಿನ್ನೆಲೆ ಡಿ.25ರ ರಾತ್ರಿ 11 ಗಂಟೆಗೆ ದೇವಾಲಯದ ಬಾಗಿಲು ಹಾಕಲಾಗುವುದು. ಈ ಹಿನ್ನೆಲೆಯಲ್ಲಿ ಬೆಟ್ಟ ಹತ್ತಿ ಬರುವವರಿಗೂ ಸೇರಿದಂತೆ ಯಾರಿಗೂ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ವೀಕ್ಷಣೆ ಹೇಗೆ: ಗ್ರಃಣವನ್ನು ಬರಿಗಣ್ಣಿನಿಂದ ನೋಡುವುದು ತೀರಾ ಅಪಾಯಕಾರಿ ಹಾಗಾಗಿ ಅದನ್ನು ವೀಕ್ಷಿಸುವ ಮುನ್ನ ಕೆಲ ಮುನ್ನಡಚ್ಚರಿಕಾ ವಿಧಾನಗಳನ್ನು ಅನುಸರಿಸುವುದು ಒಳಿತು. ಸೂರ್ಯ ಗ್ರಹಣ ವೀಕ್ಷಣೆಗೆ ಸೌರ ಕನ್ನಡಕ ಬಳಕೆ ಸೂಕ್ತ, ಎಕ್ಸ್ ರೇ ಹಾಳೆ ಸೇರಿದಂತೆ ಬೇರೆ ವಸ್ತುಗಳ ಬಳಕೆ ಬೇಡ

ಕ್ಯಾಮೆರಾದಲ್ಲಿ ಪೋಟೋ ಕ್ಲಿಕ್ಕಿಸುವಾಗ ಮತ್ತು ದೂರದರ್ಶಕದ ಮೂಲಕ ವೀಕ್ಷಣೆ ಮಾಡುವಾಗ ಸೌರ ಹಾಳೆಯನ್ನು ಅಳವಡಿಸಿಕೊಂಡು ವೀಕ್ಷಣೆ ಮಾಡುವುದು ಸುರಕ್ಷಿತ ಎಂದು ತಜ್ಞರು ಹೇಳಿದ್ದಾರೆ.

ಎಲ್ಲೆಲ್ಲಿ ಗೋಚರ: ಈ ಕಂಕಣ ಸೂರ್‍ಯ ಗ್ರಹಣವು ಭಾರತ ಮಾತ್ರವಲ್ಲದೇ ಸೌದಿ ಅರೇಬಿಯಾ, ಕತಾರ್‍, ಮಲೇಶಿಯಾ, ಓಮಾನ್, ಸಿಂಗಾಪುರ, ಶ್ರೀಲಂಕಾ, ಮರೀನಾ ದ್ವೀಪ ಹಾಗೂ ಬೋರ್ನಿಯೋ ದೇಶಗಳಲ್ಲಿ ಗೋಚರಿಸಲಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...