angadi ಎಕಾನಮಿ ಹಾಳಾಗಿದ್ರೆ ಜನ ಮದುವೆ ಆಗ್ತಿದ್ರಾ: ಸುರೇಶ್ ಅಂಗಡಿ ಪ್ರಶ್ನೆ

angadi
central minister suresh angadi

angadi ಜನ ಮದ್ವೆ ಆಗ್ತಿದ್ದಾರೆ, ರೈಲುಗಳು ತುಂಬಿವೆ ಅಂದ್ರೆ ಎಕಾನಮಿ ಚೆನ್ನಾಗಿದೆ ಎಂದ ಸುರೇಶ

ಹೊಸದಿಲ್ಲಿ: ನರೇಂದರ ಮೋದಿ ಅವರ ಸರಕಾರದಲ್ಲಿ ಅಡ್ಡ ಮಾತಿನ ( angadi) ಸಚಿವರಿಗೇನೂ ಕೊರತೆ ಇಲ್ಲ. ಆ ಪಟ್ಟಿಗೆ ಲೇಟೆಸ್ಟ್ ಸೇರ್ಪಡೆ ನಮ್ಮ ಸುರೇಶ್ ಅಂಗಡಿ.

ಇದನ್ನೂ ಓದಿ: ದೇಶದ ’ಗೃಹ ಸಚಿವ’ ಶಿವಕುಮಾರ್‌ಗೆ ಜಾಮೀನು ಊರ್ಜಿತ

ದೇಶದ ಆರ್ಥಿಕ ಪರಿಸ್ಥಿತಿ ನೆಟ್ಟಗಿಲ್ಲ. ಲೋಪಗಳು ಹೆಚ್ಚುತ್ತಿವೆ ಎಂಬ ವರದಿಗಳು ವ್ಯಾಪಕವಾಗಿರುವ ಬೆನ್ನಲ್ಲಿಯೇ ಸರಕಾರದ ಕ್ರಮಗಳನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ರೈಲು ಸಚಿವ ಸುರೇಶ್ ಅಂಗಡಿ ಅವರು ತಮ್ಮ ನಾಲಗೆ ಹರಿ ಬಿಟ್ಟಿದ್ದಾರೆ.

ಜನ ಮೊದಲಿನಂತೆಯೇ ಮದುವೆ ಆಗುತ್ತಿದ್ದಾರೆ. ಮದುವೆಯಾಗುವವರ ಸಂಖ್ಯ ಕಡಿಮೆ ಆಗಿಲ್ಲ. ಹಾಗೆಯೇ ರೈಲುಗಳು ಎಂದಿಗಿಂತ ಹೆಚ್ಚಾಗಿ ತುಂಬಿ ತುಳುಕುತ್ತಿವೆ. ಹೀಗಿರುವಾಗ ಎಕಾನಮಿ ಸರಿ ಇಲ್ಲ ಎಂದು ಯಾರ್‍ರೀ ಹೇಳಿದ್ದು ಎಂದಿದ್ದಾರೆ ನಮ್ಮ ಅಂಗಡಿ ಸಾಹೇಬರು!

ರೈಲುಗಳು ಮಾತ್ರವಲ್ಲ ವಿಮಾನಗಳು ಸಹ ಪ್ರಯಾಣಿಕರಿಂದ ತುಂಬಿರುತ್ತವೆ. ಪ್ರತಿ ಮೂರು ವರ್ಷಕ್ಕೊಮ್ಮೆ ಎಕಾನಮಿ ಕೆಳಮುಖವಾಗುವುದು ಸಹಜ. ಈಗಲೂ ಅದೇ ಆಗಿದೆಯಷ್ಟೇ. ಅದನ್ನೇ ಟೀಕಾಕರರು ವ್ಯತಿರಿಕ್ತವಾಗಿ ವ್ಯಾಖ್ಯಾನ ಮಾಡುತ್ತಿದ್ದಾರೆ ಎಂದು ಅಂಗಡಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...