amit insists ಪೌರತ್ವ ಕಾಯಿದೆ ವಾಪಸ್ ಪ್ರಶ್ನೆಯೇ ಇಲ್ಲ: ಅಮಿತ್ ಶಾ

amit insists
home minister amit shah

amit insists ಪ್ರತಿಪಕ್ಷಗಳು ಪೌರತ್ವ ಕಾಯಿದೆ ಬಗ್ಗೆ ಸುಳ್ಳು ಹೇಳುತ್ತಿವೆ: ಅಮಿತ್ ಶಾ

ಜೋಧಪುರ: ಯಾವುದೇ ಕಾರಣಕ್ಕೂ ಪೌರತ್ವ ಕಾಯಿದೆ ವಿಚಾರದಲ್ಲಿ ಇಟ್ಟ ( amit insists ) ಹೆಜ್ಜೆ ಹಿಂಪಡೆಯುವ ಮಾತೇ ಇಲ್ಲ ಎಂದು ಗೃಹ ಮಂತ್ರಿ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕ ರ್‍ಯಾಲಿಯಲ್ಲಿ ಮಾತನಾಡಿದ ಅಮಿತ್ ಶಾ ಪೌರತ್ವ ಕಾಯಿದೆ ಜಾರಿಗೆ ಕೇಂದ್ರ ಸರಕಾರ ಬದ್ಧವಾಗಿದೆ ಎಂದರು.

ಇದನ್ನೂ ಓದಿ: ಪೌರತ್ವ ಶಾಸನ ಬೆಂಬಲಿಸಲು 8866288662ಗೆ ಮಿಸ್ಡ್ ಕಾಲ್ ಮಾಡಿ

ಈ ಶಾಸನದಿಂದ ದೇಶದಲ್ಲಿರುವ ಯಾವೊಬ್ಬ ಅಲ್ಪಸಂಖ್ಯಾತರಿಗೂ ಯಾವುದೇ ರೀತಿಯ ತೊಮದರೆ ಆಗುವುದಿಲ್ಲ. ಕಾಂಗ್ರೆಸ್ ಮತ್ತು ಇತರ ಕೆಲವು ಪ್ರತಿಪಕ್ಷಗಳು ರಾಜಕೀಯ ಕಾರಣಗಳಿಗಾಗಿ ಜನರನ್ನು ದಾರಿ ತಪ್ಪಿಸುತ್ತಿವೆ ಎಂದು ಅಮಿತ್ ಶಾ ಹೇಳಿದರು.

ನಿಮಗೆ ತಾಕತ್ತಿದ್ದರೇ ಈ ಶಾಸನದ ಬಗೆಗೆ ಬಹಿರಂಗ ಚರ್ಚೆಗೆ ಬನ್ನಿ. ಇಲ್ಲ ಈ ಕಾಯಿದೆಯನ್ನು ನಿಮಗಾಗಿ ಇಟಾಲಿಯನ್ ಭಾಷೆಗೆ ತರ್ಜುಮೆ ಮಾಡಿಸಿಕೊಡುತ್ತೇನೆ ಎಂದು ಅಮಿತ್ ಶಾ ಹೆಸರು ಹೇಳದೇ ಕಾಂಗ್ರೆಸ್ ನಾಯಕತ್ವವನ್ನು ಹೀಗಳೆದರು.

ಕಾಂಗ್ರೆಸ್ ಮತ್ತು ಅದರ ಮಿತ್ರ ಮಂಡಳಿ ಏನೇ ಕಸರತ್ತು ನಡೆಸಲಿ ಜನರನ್ನು ತಪ್ಪು ದಾರಿಗೆಳೆದರೂ ಅದಕ್ಕೆ ನಾವು ಬಗ್ಗುವುದಿಲ್ಲ. ಜನರಿಗೆ ಸತ್ಯ ಏನೆಂದು ತಿಳಿಹೇಳಿ ಕಾಯಿದೆಯನ್ನು ಕಾರ್‍ಯರೂಪಕ್ಕೆ ತರುತ್ತೇವೆ ಎಂದು ಇದೇ ಸಂದರ್ಭದಲ್ಲಿ ಶಾ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...