ajit pawar ಅಂದು ಕುಮಾರಸ್ವಾಮಿ, ಇಂದು ಅಜಿತ್ ಪವಾರ್…

ajit pawar
hd kumaraswamy and ajit pawar

ajit pawar ಆಗ ಎಚ್ಡಿಕೆ ಹಿಂದೆ ಶಾಸಕರಿದ್ದರು, ಅಜಿತ್‌ ಹಿಂದೆ ಇದ್ದಾರಾ?

ಬೆಂಗಳೂರು: ಮಹಾರಾಷ್ಟ್ರದಲ್ಲಿ ಶನಿವಾರ ಮುಂಜಾವಿನಲ್ಲಿ ( ajit pawar ) ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆ 13 ವರ್ಷಗಳ ಹಿಂದೆ ಕರ್ನಾಟಕದಲ್ಲಿ ನಡೆದ ರಾಜಕೀಯ ಪ್ರಹಸನದ ಕನ್ನಡಿ ರೂಪದಂತೆ ಕಾಣುತ್ತಿದೆ.

ಇದನ್ನೂ ಓದಿ: ಮಹಾರಾಷ್ಟ್ರ ಬಿಜೆಪಿ ಸರಕಾರದ ಆಯುಷ್ಯ ಎಷ್ಟು

ಅಂದು ಮಾಜಿ ಪ್ರಧಾನಿ ದೇವೇಗೌಡರ ಪುತ್ರ ಕುಮಾರಸ್ವಾಮಿ ತಮ್ಮ ಪಕ್ಷದ ಶಾಸಕರನ್ನು ಹೈಜಾಕ್ ಮಾಡಿ ಬಿಜೆಪಿಯ ಯಡಿಯೂರಪ್ಪ ಅವರ ಜೊತೆ ಕೈಜೋಡಿಸಿ ಮೈತ್ರಿ ಸರಕಾರ ರಚಿಸುವ ಮೂಲಕ ಇಡೀ ದೇಶವನ್ನೇ ದಂಗುಬಡಿಸಿದ್ದರು.

ಈಗ ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್‍ ಅವರು ಸಹ ಕುಮಾರಸ್ವಾಮಿ ಅವರ ಹಾದಿಯನ್ನೇ ತುಳಿದು ದೇವೇಂದ್ರ ಫಡ್ನವಿಸ್ ಜೊತೆಗೂಡಿ ಸರಕಾರ ರಚಿಸಿದ್ದಾರೆ. ಆದರೆ ಇಲ್ಲಿ ಒಂದು ವ್ಯತ್ಯಾಸ ಕಾಣ್ಣಿಗೆ ರಾಚುವಂತಿದೆ.

ಇದೇ 13 ವರ್ಷಗಳ ಹಿಂದೆ ಕಾಂಗ್ರೆಸ್ ಜೊತೆಗಿನ ಮೈತ್ರಿಗೆ ಕೈಕೊಟ್ಟು ಬಿಜೆಪಿ ಜೊತೆ ಕೈಜೋಡಿಸಿದಾಗ ಬೆರಳೆಣಿಕೆಯ ಜನ ಹೊರತು ಪಡಿಸಿ ಜೆಡಿಎಸ್‌ನ ಬಹುಪಾಲು ಶಾಸಕರು ಎಚ್ಡಿ ಕುಮಾರಸ್ವಾಮಿ ಅವರ ಬೆನ್ನಿಗೆ ನಿಂತಿದ್ದರು.

ಆದರೆ ಮಹಾರಾಷ್ಟ್ರದ ಪರಿಸ್ಥಿತಿ ಕೊಂಚ ಭಿನ್ನವಾಗಿದೆ. ಅಂದು ಕುಮಾರಸ್ವಾಮಿ ಜೊತೆ ಶಾಸಕರ ದೊಡ್ಡ ದಂಡೇ ಹೊಸ ಮೈತ್ರಿಗೆ ಸೈ ಎಂದಿತ್ತು. ಆದರೆ ಈಗ ಅಜಿತ್ ಪವಾರ್‌ ಬೆನ್ನಿಗೆ ಎನ್ಸಿಪಿ ಶಾಸಕರು ದೊಡ್ಡ ಸಂಖ್ಯೆಯಲ್ಲಿ ನಿಂತಂತೆ ಸದ್ಯಕ್ಕೆ ಕಾಣುತ್ತಿಲ್ಲ.

ಹದಿಮೂರು ವರ್ಷಗಳ ಹಿಂದೆ ಬಿಜೆಪಿ ಜೊತೆ ಕೈಜೋಡಿಸಿದ ಕುಮಾರಸ್ವಾಮಿ ೨೦ ತಿಂಗಳು ಆಡಳಿತವನ್ನು ನಡೆಸಿದ್ದರು. ಈಗ ಅದೇ ಬಿಜೆಪಿ ಜೊತೆ ಸೇರಿ ಹೊರಟಿರುವ ಅಜಿತ್ ಪವಾರ್‍ ಸರಕಾರವನ್ನು ಉಳಿಸಿಕೊಳ್ಳುವಲ್ಲಿ ಎಷ್ಟರಮಟ್ಟಿಗೆ ಪ್ರಭಾವಿ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...