aicc ಮತ್ತೆ ಸೋನಿಯಾ ಕೈಗೆ ಕಾಂಗ್ರೆಸ್ ಜುಟ್ಟು

sonia
former congress president sonia gandhi

aicc ಸೋನಿಯಾಗೆ ದುಂಬಾಲು ಬಿದ್ದು ಕೈ ಪಕ್ಷ

ಹೊಸದಿಲ್ಲಿ: ಸಾಕಷ್ಟು ಚರ್ಚೆ ( aicc )  ಸಮಾಲೋಚನೆ ನಂತರ ಸೋನಿಯಾ ಗಾಂಧಿ ಹೆಗಲಿಗೆ ಪಕ್ಷ ಮುನ್ನಡೆಸುವ ಅಧಿಕಾರ ನೀಡಲು ಕಾಂಗ್ರೆಸ್ ನಿರ್ಧಾರ ಮಾಡಿದೆ.

ರಾಹುಲ್ ಗಾಂಧಿ ಅವರ ರಾಜೀನಾಮೆಯಿಂದ ಖಾಲಿಯಾಗಿದ್ದ ಸ್ಥಾನವನ್ನು ತುಂಬುವಂತೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸೋನಿಯಾ ಗಾಂಧಿ ಅವರನ್ನು ಕೇಳಿಕೊಂಡಿದೆ.

ಇದನ್ನೂ ಓದಿ: ವರುಣನ ಕುಹಕ, ಅರ್ಧ ಮುಳುಗಿದ ಕರ್ನಾಟಕ

ಹೊಸ ಅಧ್ಯಕ್ಷರ ಆಯ್ಕೆ ವಿಸ್ತಾರವಾದ ಸಮಾಲೋಚನೆ ನಂತರ ಆಗಬೇಕು ಎಂದು ನಿರ್ಗಮಿತ ನೇತಾರ ರಾಹುಲ್ ಗಾಂಧಿ ಸೂಚಿಸಿದರು. ಬಳಿಕ ಉತ್ತರಾಧಿಕಾರಿ ಆಯ್ಕೆಯಲ್ಲಿ ಇರುವುದು ಸೂಕ್ತವಲ್ಲ ಎಂದು ರಾಹುಲ್ ಹಾಗೂ ಸೋನಿಯಾ ಸಿಡಬ್ಲೂಸಿ ಸಭೆಯಿಂದ ಹೊರಬಂದರು.

ರಾಹುಲ್ ಸಲಹೆಯ ಮೇರೆಗೆ ಎಲ್ಲ ರಾಜ್ಯ ಪ್ರತಿನಿಧಿಗಳ ಜೊತೆ ವ್ಯಾಪಕ ಸಮಾಲೋಚನೆ ನಡೆಸುವ ಸಲುವಾಗಿ ಐದು ಗುಂಪುಗಳನ್ನು ರಚಿಸಲಾಯಿತು. ಈ ಸಮಾಲೋಚನೆಯಲ್ಲಿ ಎಲ್ಲ ಪಿಸಿಸಿ ಅಧ್ಯಕ್ಷರು ಹಾಗೂ ಸಿಎಲ್ಪಿ ಮುಖಂಡರನ್ನು ಸಂಪರ್ಕಿಸಲಾಯಿತು.

ಎಐಸಿಸಿ ಕೇಂದ್ರ ಕಚೇರಿಯಲ್ಲಿ ಬೆಳಿಗ್ಗೆ 11 ಗಂಟೆಗೆ ಸಭೆ ಪ್ರಾರಂಭವಾಯಿತು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಗುಲಾಮ್ ನಬಿ ಆಜಾದ್ ಮತ್ತು ಹಿರಿಯ ನಾಯಕ ಎ.ಕೆ.ಆಂಟನಿ ಅವರು ಸಂಭವನೀಯ ಅಧ್ಯಕ್ಷರ ಆಯ್ಕೆಯ ಬಗ್ಗೆ ಸಮಾಲೋಚನೆ ಮಾಡಿದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...