adhyaksha in america ಅಧ್ಯಕ್ಷ ಇನ್ ಅಮೆರಿಕ: ನಗು ಜಾಸ್ತಿ, ಕಥೆ ನಾಸ್ತಿ

adhyaksha in america
sharan in adhyaksha in america

adhyaksha in america ಶರಣ್ ನಟನೆಯ ಅಧ್ಯಕ್ಷ ಇನ್ ಅಮೆರಿಕ ವಿಮರ್ಶೆ

ಬೆಂಗಳೂರು: ಶರಣ್ ನಟನೆಯ ಅಧ್ಯಕ್ಷ ಇನ್ ಅಮೆರಿಕ ( adhyaksha in america ) ತೆರೆಕಂಡಿದ್ದು ಪ್ರೇಕ್ಷಕರಿಗೆ ನಗೆಯೂಟ ಉಣಬಡಿಸುತ್ತಿದೆ. ಹಾಸ್ಯ, ಮಹತ್ವಾಕಾಂಕ್ಷೆ, ಮದುವೆಯ ಮಹತ್ವ… ಹೀಗೆ ನಾನಾ ಭಾವನೆಗಳ ಅಲೆಯ ಮೇಲೆ ಈ ಅಧ್ಯಕ್ಷನ ಪಯಣವೇ ಚಿತ್ರ ತಿರುಳು.

ಇದನ್ನೂ ಓದಿ: ಚೀನಾಕ್ಕೆ ಹೊರಟ ಕಿಚ್ಚ ಪೈಲ್ವಾನ್

ಶರಣ್ ಚಿತ್ರ ಎಂದ ಮೇಲೆ ಜನ ಬಯಸುವುದು ಧಾರಳ ನಗು. ಇಲ್ಲಿ ಅದಕ್ಕೆ ಮೋಸವಿಲ್ಲ. ದುಡ್ಡಿನ ಬೆನ್ನಿಗೆ ಬಿದ್ದು ದೂರದ ಅಮೆರಿಕೆಗೆ ಹಾರಿ ಜೀವನದಲ್ಲಿ ಏನೆಲ್ಲ ಪಾಡು ಬೀಳುವ ಯುವಕ ಪಾತ್ರದಲ್ಲಿ ಜೀವಂತಿಕೆಗೆ ಬರವಿಲ್ಲ. ನಗೆಯ ಬುಗ್ಗೆಯೇ ಹರಿಯುತ್ತದೆ.

ಆದರೆ ನಗೆಯನ್ನು ಬಂಡವಾಳವಾಗಿಸಿಕೊಲ್ಳುವ ತವಕದಲ್ಲಿ ನಿರ್ದೇಶಕರು ಕಥೆಯ ಕಡೆ ಅಗತ್ಯ ಗಮನ ನೀಡಿದಂತಿಲ್ಲ. ಗಟ್ಟಿ ಕಥೆಯ ಕೊರತೆ ಎದ್ದು ಕಾಣುತ್ತದೆ. ಇಲ್ಲಿ ಕಥೆ ಎಂಬುದು ಸಂದರ್ಭೋಚಿತವಾಗಿದೆ. ಸಂದರ್ಭಕ್ಕೆ ತಕ್ಕಂತೆ ಕಥೆ ಇರುವಂತಿದೆ.

ಚಿತ್ರದಲ್ಲಿ ನಗು ಹಾಸುಹೊಕ್ಕಾಗಿದೆ. ಈ ನಗುವಿನ ಹಂದರದಲ್ಲಿ ಪಾತ್ರಗಳು ತೂರಿಹೋಗುತ್ತವೆ. ಆದರೆ ಇದೆಲ್ಲವನ್ನೂ ಗಟ್ಟಿಯಾಗಿ ಹಿಡಿದಿಡಬಲ್ಲ ಕಥೆಯೇ ಇಲ್ಲಿ ನಾಸ್ತಿ. ಇದರ ಹೊರತಾಗಿಯೂ ಚಿತ್ರ ಪ್ರೇಕ್ಷಕನನ್ನು ತನ್ನೊಂದಿಗೆ ನಡೆಸಿಕೊಂಡು ಹೋಗುತ್ತದೆ.

ಶರಣ್ ತಮ್ಮ ಎಂದಿನ ಲವಲವಿಕೆ ತೋರಿದರೇ ರಾಗಿಣಿ ದ್ವಿವೇದಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಸಾಧು, ರಾಂಗಾಯಣ ರಘು, ಶಿವರಾಜ್ ನಗಿಸುತ್ತಾರೆ. ಹರಿಕೃಷ್ಣ ಸಂಗೀತ ಉಚಿತವಾಗಿದೆ. ಒಟ್ಟಿನಲ್ಲಿ ಎರಡು ತಾಸು ನಗುನಗುತ ಕಾಲ ಕಳೆಯಲು ಈ ಚಿತ್ರ ಸಹಕರಿಸುತ್ತದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...