abhinandan varthaman ವೀರ ಯೋಧ ಅಭಿನಂದನ್‌ಗೆ ವೀರಚಕ್ರ ಗೌರವ

abhinandan varthaman
wing commander abhinandan varthaman

abhinandan varthaman ಬಾಲಾಕೋಟ್ ದಾಳಿಯ ಪೈಲಟ್‌ಗಳಿಗೆ ವಾಯುಸೇನಾ ಪದಕ

ಹೊಸದಿಲ್ಲಿ: ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತ ಕೈಗೊಂಡ ( abhinandan varthaman ) ಬಾಲಾಕೋಟ್‌ ಮಾರಕ ದಾಳಿಯ ಬಳಿಕ ಪಾಕ್ ಯುದ್ಧವಿಮಾನವನ್ನು ಹೊಡೆದುರುಳಿಸಿ ಅಲ್ಲಿನ ಭೂಸ್ಪರ್ಶಿಸಿ 24 ಗಂಟೆಗಳಲ್ಲಿ ಭಾರತಕ್ಕೆ ವಾಪಸಾಗುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದ ಅಭಿನಂದನ್ ವರ್ತಮಾನ್‌ಗೆ ವೀರ ಚಕ್ರ ನೀಡಿ ಸನ್ಮಾನಿಸಲಾಗುತ್ತಿದೆ.

ಇದನ್ನೂ ಓದಿ: ತಾಯ್ನಾಡಿಗೆ ಮರಳಿದ ವೀರಯೋಧ ಅಭಿನಂದನ್

ಪಾಕಿಸ್ತಾನದ ಎಫ್-16 ವಿಮಾನವನ್ನು ಹೊಡೆದುರುಳಿಸಿದ್ದೇ ಅಲ್ಲದೇ ಪಾಕ್ ವಶದಲ್ಲಿದ್ದಾಗ ತೋರಿದ ಧೈರ್ಯ, ಸ್ಥೈರ್ಯದ ಹಿನ್ನೆಲೆಯಲ್ಲಿ ಅಭಿನಂದನ್‌ಗೆ ದೇಶದ ಮೂರನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ವೀರಚಕ್ರವನ್ನು ನೀಡಲಾಗುತ್ತಿದೆ.

ಇದೇ ವೇಳೆ ಪುಲ್ವಾಮಾ ಉಗ್ರ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಗಡಿಯೊಳಗಿರುವ ಬಾಲಾಕೋಟ್‌ ಪ್ರದೇಶದಲ್ಲಿ ಮಿಂಚಿನ ದಾಳಿ ನಡೆಸಿ ಶತ್ರುನಾಶ ಮಾಡಿದ ವಾಯುಸೇನಾ ತಂಡದ ಐವರು ಮಿರಾಜ್ ಫೈಟರ್‍ ಪೈಲಟ್‌ಗಳಿಗೆ ವಾಯು ಸೇನಾ ಪದಕ ನೀಡಿ ಗೌರವಿಸಲಾಗುವುದು.

ಪಾಕಿಸ್ತಾನದ ವಶದಿಂದ ವಾಪಸಾದ ಬಳಿಕ ಅಭಿನಂದನ್ ಇನ್ನೂ ವೈದ್ಯಕೀಯ ತಪಾಸಣೆ, ನೆರವು ಪಡೆಯುತ್ತಿದ್ದು ಕರ್ತವ್ಯಕ್ಕೆ ಹಾಜರಾಗಲು ಇನ್ನಷ್ಟು ಸಮಯ ಬೇಕಾಗಬಹುದು. ಬಾಲಾಕೋಟ್ ದಾಳಿಯ ಒಂದು ದಿನದ ತರುವಾಯ ಪಾಕ್ ದಾಳಿ ವೇಳೆ ಅಭಿನಂದನ್ ಈ ಅಪ್ರತಿಮ ಸಾಹಸ ಮೆರೆದಿದ್ದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...