2nd t20 ಮಿಂಚಿದ ಕನ್ನಡಿಗ ರಾಹುಲ್, ಸೈನಿ; ಗೆದ್ದು ಬಿಗಿದ ಭಾರತ

2nd t20
kl rahul in action against srilanka

2nd t20 ಮೊದಲ ಟಿ-20: ಲಂಕೆಗೆ 7 ವಿಕೆಟ್ ಸೋಲುಣಿಸಿದ ಕೊಹ್ಲಿ ಪಡೆ

ಇಂದೋರ್‍: ಆರಂಭಿಕ ಕೆಎಲ್ ರಾಹುಲ್ ಅವರ ಭರ್ಜರಿ ಬ್ಯಾಟಿಂಗ್ ಮತ್ತು ( 2nd t20 )  ದಾಳಿಕಾರರ ಸಂಘಟಿತ ಪ್ರಯತ್ನದ ನೆರವಿನಿಂದ ಭಾರತ ತಂಡವು ಎರಡನೇ ಟಿ-20 ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಏಳು ವಿಕರಟ್ಟುಗಳಿಂದ ಪರಾಭವಗೊಳಿಸಿ ಸರಣಿಯಲ್ಲಿ ಮುನ್ನಡ ಸಾಧಿಸಿದೆ.

ಇದನ್ನೂ ಓದಿ: ಭಾರತ್ ಬಂದ್‌: ಶಾಲಾ-ಕಾಲೇಜಿಗಿಲ್ಲ ರಜೆ; ಹೋಟೆಲ್, ಸರಕಾರಿ ಕಚೇರಿ ಓಪನ್

ಮುರು ಪಂದ್ಯಗಳ ಸರಣಿಯ ಮೊದಲ ಪಂದ್ಯ (ಭಾನುವಾರ) ಗುವಾಹಟಿಯಲ್ಲಿ ಮಳೆಗಾಹುತಿಯಾಗಿತ್ತು. ಎರಡನೇ ಪಂದ್ಯ ಭಾರತಕ್ಕೆ ಸುಲಭವಾಗಿ ಒಲಿದಿದ್ದು ಮೂರು ಪಂದ್ಯಗಳ ಸರಣಿಯಲ್ಲಿ ಕೊಹ್ಲಿ ಪಡೆಯು 1-0 ಪಂದ್ಯಗಳ ಮುನ್ನಡೆ ಸಂಪಾದಿಸಿದೆ

ಇಲ್ಲಿನ ಹೋಳ್ಕರ್ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಶ್ರೀಲಂಕಾ ತಂಡ ನಿಗದಿತ 20 ಓವರ್‌ಗಳಿಗೆ 9 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿತು.

ಇದಕ್ಕೆ ಉತ್ತರವಾಗಿ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡವು ಭಾರತ 17.3 ಓವರ್ ಗಳಿಗೆ ಕೇವಲ ಮೂರು ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿ ಜಯದ ನಗೆ ಬೀರಿತು.

ಭಾರತ ತಂಡದ ಪರ ಆರಂಭಿಕ ಜೋಡಿ ಶಿಖರ್ ಧವನ್ ಹಾಗೂ ಕೆ.ಎಲ್ ರಾಹುಲ್ ಜೋಡಿ ಮೊದಲನೇ ವಿಕೆಟ್‌ಗೆ 71 ರನ್ ಗಳಿಸಿ ಭರ್ಜರಿ ಆರಂಭ ನೀಡಿತು.

ಶಿಖರ್ ಧವನ್ 29 ಎಸೆತಗಳಲ್ಲಿ 32 ರನ್ ಗಳಿಸಿ ನಿರ್ಗಮಿಸಿದರು. ಮತ್ತೊಂದು ತುದಿಯಲ್ಲಿ ರಾಹುಲ್ 32 ಎಸೆತಗಳನ್ನು ಎದುರಿಸಿ ಆರು ಬೌಂಡರಿಯೊಂದಿಗೆ 45 ರನ್ ಸಿಡಿಸಿದರು.

3ನೇ ಕ್ರಮಾಂಕಕ್ಕೆ ಬಡ್ತಿ ಪಡೆದ ಶ್ರೇಯಸ್ ಅಯ್ಯರ್ 34 ರನ್ ಗಳಿಸಿದರೇ, ನಾಯಕ ವಿರಾಟ್ ಕೊಹ್ಲಿ ಕೇವಲ 17 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ಒಂದು ಬೌಂಡರಿಯೊಂದಿಗೆ 30 ರನ್ ಗಳಿಸಿ ತಂಡವನ್ನು ಇನ್ನೂ 15 ಎಸೆತ ಬಾಕಿ ಇರುವಾಗಲೇ ಗೆಲುವಿನ ದಡ ಸೇರಿಸಿದರು.

ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು ಭಾರತದ ಸಮರ್ಪಕ ದಾಳಿಯನ್ನು ಎದುರಿಸಲು ತಿಣುಕಾಡಿತು. ಕುಶಾಲ್ ಪೆರೆರಾ ಹೊರತಾಗಿ ಉಳಿದ ಆಟಗಾರರು ತಳ ಕಚ್ಚಿ ನಿಂತು ಹೋರಾಡುವ ಉಮೇದನ್ನೇ ತೋರಲಿಲ್ಲ.

ಪರೇರಾ ಕೊಂಚ ಪ್ರತಿರೋಧ ತೋರಿ 34 ರನ್ ಮಾಡಿದರು. ಭಾರತದ ಪರ ಮಿಂಚಿದ ಶಾರ್ದೂಲ ಠಾಕೂರ್‍ ಮೂರು ವಿಕೆಟ್ ಕಿತ್ತರೇ, ಯುವ ವೇಗಿ ನವದೀಪ್ ಸೈನಿ (ಪಂದ್ಯ ಪುರುಷ) ಕೇವಲ 18 ರನ್ ನೀಡಿ ಎರಡು ವಿಕೆಟ್ ಕಬಳಿಸುವ ಮೂಲಕ ಎಲ್ಲರ ಗಮನ ಸೆಳೆದರು. ಸರಣಿಯ ಮೂರನೇ ಪಂದ್ಯ ಶುಕ್ರವಾರ ನಡೆಯಲಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...